ಮೈಸೂರು: ಕರ್ನಾಟಕದ ಮೊದಲ ಹಂತದ ಚುನಾವಣೆ ನಡೆಯುವ ದಿನ೧೮ ಅಂದರೆ '1 + 8 = 9', ಇದು ನನ್ನ ಅದೃಷ್ಟದ ಸಂಖ್ಯೆ ಹೀಗಾಗಿ ಈ ಚುನಾವಣೆಯಲ್ಲಿ ಗೆಲುವು ನಮ್ಮದೆ ಎಂದು ಪಿಡಬ್ಲ್ಯೂಡಿ ಮಂತ್ರಿ ಎಚ್.ಡಿ. ರೇವಣ್ಣ ಗುರುವಾರ ಭವಿಷ್ಯ ನುಡಿದಿದ್ದಾರೆ.ಜ್ಯೋತಿಷ್ಯ ಮತ್ತು ವಾಸ್ತುವಿನ ಆಳವಾದ ನಂಬಿಕೆಗೆ ಹೆಸರುವಾಸಿಯಾದ ರೇವಣ್ಣ ಸಂಖ್ಯಾಶಾಸ್ತ್ರಜ್ಞರಾಗಿ ಪರಿವರ್ತಿತರಾಗಿದ್ದಾರೆ! ರ್ನಾಟಕದ ಪ್ರಥಮ ಹಂತದ ಲೋಕಸಭಾ ಚುನಾವಣೆಯ ದಿನಾಂಕವು ಆಡಳಿತ ಪಕ್ಷಗಳಿಗೆ 'ಅದೃಷ್ಟ' ತರಲಿದೆ ಎಂದು ಅವರು ಹೇಳಿದ್ದಾರೆ.
ಮೊದಲ ಹಂತ ಏಪ್ರಿಲ್ 18 ರಂದು ನಡೆಯಲಿದೆ. '1 + 8 = 9', ನೈಸರ್ಗಿಕವಾಗಿ ಅದೃಷ್ಟವನ್ನು ತರುವ ನಂಬಿಕೆ ಇದೆ. ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಅಧಿಕಾರಕ್ಕೆ ಮರಳುತ್ತದೆ ಎಂದು ರೇವಣ್ಣ ನಂಬಿದ್ದಾರೆ.
ಮಾದ್ಯಮದವರೊಂದಿಗೆ ಮಾತನಾಡಿದ ಸಚಿವರು 2018 ರ ವಿಧಾನಸಭಾ ಚುನಾವಣೆಯ ಉದಾಹರಣೆ ನೀಡಿದ್ದಾರೆ. ಅವರ ಸಹೋದರ ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದು '18' ಸಂಖ್ಯೆಯ ಬಲದಿಂಡ./ ಈ ಸಾಂಖ್ಯೆ ಒಟ್ತಾಗಿ ಸೇರಿದರೆ '9' ಆಗಲಿದೆ.
ಇಷ್ಟಲ್ಲದೆ 22 ಎಂಬುದು ಸಹ ಉತ್ತಮ ಸಂಖ್ಯೆ "ನಾವು (ಸಮ್ಮಿಶ್ರ ಪಾಲುದಾರರು) ಖಂಡಿತವಾಗಿ ರಾಜ್ಯದಲ್ಲಿ 28 ಲೋಕಸಭಾ ಕ್ಷೇತ್ರಗಳಲ್ಲಿ 22 ಸ್ಥಾನಗಳನ್ನು ಗೆಲ್ಲುತ್ತೇವೆ" ಅವರು ಭವಿಷ್ಯ ನುಡಿದರು. ಆದರೆ ಯಡಿಯೂರಪ್ಪ ಅವರಿಗೆ ಅದೇ ಸಂಖ್ಯೆಗಳು ಯಾವುದೇ ಅದೃಷ್ಟವನ್ನು ತರುವುದಿಲ್ಲ ಎಂದು ಅವರು ಹೇಳಿದರು. ಮೈತ್ರಿ ಪಾಲುದಾರರ ಸಂಖ್ಯೆ 9 ಖಂಡಿತವಾಗಿಯೂ ಮಾಯಾಜಾಲವನ್ನೇ ಸೃಷ್ಟಿಸುತ್ತದೆ., ಪ್ರಧಾನಿ ನರೇಂದ್ರ ಮೋದಿ ಅಧಿಕಾರ ಉಳಿಸಿಕೊಳ್ಳುವಲ್ಲಿ ಯಶಸ್ವಿಗಾಇದ್ದಾದರೆ ತಾವು ರಾಜಕೀಯ ನಿವೃತ್ತರಾಗುವುದಾಗಿಯೂ ಹೇಳಿದ್ದಾರೆ.
ಶ್ರೀರಂಗಪಟ್ಟಣದಲ್ಲಿ ನಿಂಬೆ ಮಾರಾಟಗಾರರು ರೇವಣ್ಣ ನಿಂಬೆಹಣ್ಣೆಂದು ಮಾರಾಟ ಮಾಡುತ್ತಿದ್ದಾರೆ ಎಂದು ಪೊರಶ್ನಿಸಲಾಗಿ , "ಯೆಡಿಯೂರಪ್ಪ ಮತ್ತು ಆರ್ ಅಶೋಕ್ ಗೆ ನಾನು ಅದನ್ನು ಕೊಡುತ್ತೇನೆ" ಎಂದು ನಗುತ್ತಾ ಹೇಲೀದ್ದಾರೆ.